Thursday, September 11, 2008

ಬದುಕಿ ಬದುಕಿಸು ಎಲ್ಲರನೂ....

....ಮತ್ತೆ ಮುಂಗಾರು ಮಳೆ ಕೈಕೊಟ್ಟಿದೆ. ಮಣ್ಣಿನ ಮಗನ ಮಹದಾಸೆ ಮಣ್ಣಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳು ಕೈಗೆ ಬರುವುದುದುಸ್ತರ. ವೇಳೆಗಾಗದ ಮಳೆ, ಕೈಗೆ ಸಿಗದ ರಸಗೊಬ್ಬರ, ಬೆಳೆಗೆ ಕಾಡುವ ರೋಗಬಾಧೆ, ನೆರೆಹಾವಳಿ, ಕೂಲಿಕಾರ್ಮಿಕರ ಸಮಸ್ಯೆಒಂದೇ ಎರಡೇ. ಎಲ್ಲವನ್ನೂ ದಾಟಿ ಬಂಗಾರದಂತ ಬೆಳೆ ಬೆಳೆದರೆ ಆತ ಬದುಕಿನಲ್ಲಿ ಬಂಗಾರದ ಮನುಷ್ಯನಾಗಲಿಲ್ಲ; ಮಾರುಕಟ್ಟೆಯಲ್ಲಿ ದೊರೆಯುವ ಅಲ್ಪ ಬೆಲೆಯಿಂದ. ಸಾಲದ ಬಾಧೆ ಬೆನ್ನನ್ನು ಬಾಗಿಸಿತೇ ಹೊರತು ಎದೆಸೆಟಿಸಿ, ತಲೆ ಎತ್ತಿ ನಡೆಯದಂತೆಮನೆಯಲ್ಲಡಗಿಸಿ ಕುಳ್ಳರಿಸಿತು. ಧಾರೆಯಾಗಿ ಹರಿದ ಕಣ್ಣೀರು ಭೂಗರ್ಭ ಸೇರಿತೇ ವಿನಃ ಧನಿಕರ ಮನ ಕರಗಿಸಲಿಲ್ಲ. ಬೆಮಬಿಡದೇಕಾಡುತ್ತಿರುವ ಸಂಕಷ್ಟಗಳ ಸರಮಾಲೆಗೆ ಸವಾಲೊಡ್ಡದೇ ನೇಗಿಲಯೋಗಿ ನೇಣಿಗೆ ಕೊರಳೊಡ್ಡುತ್ತಿದ್ದಾನೆ. ಇದು ಪ್ರತಿ ವರ್ಷದ ಪ್ರತಿರೈತನ ಬದುಕಿನ ಚಿತ್ರಣ.
ಇಂದು ಕೋಟ್ಯಾನು ಕೋಟಿ ಜನರ ನಡುವೆಮೇಟಿ ವಿದ್ಯೆಯವನ ಆರ್ತನಾದ ಯಾರಿಗೂ ಕೇಳದಾಗಿದೆ. ಎಲ್ಲರಿಗೂ ಆನ್ನದಾತನಅಳಲು ಆಲಿಸದಂತ ಕಿವುಡುತನ. ಆತನ ಅಂತರಂಗದ ಅರಿತ ಪತ್ರಿಕೆಗಳು, ಕ್ರಿಕೆಟ್ ಐಟಿ-ಬಿಟಿ, ಪ್ಯಾಷನ್ನು, ಷೇರುಪೇಟೆಯತ್ತಮುಖ ಮಾಡಿವೆ. ಅನ್ನದಾತನ ಆತ್ಮಹತ್ಯೆಗೆ ಅತೀ ಚಿಕ್ಕ ಕಾಲಮ್ಮಿನ ಸುದ್ದಿ ಮಾಡಿ ಸುಮ್ಮನಾಗುತ್ತವೆ. ಪರಿಣಾಮವಾಗಿ ಒಕ್ಕುವಒಕ್ಕಲಿಗನೇ ಬಿಕ್ಕುವಂತಾಗಿದೆ. ತುತ್ತು ಅನ್ನಕ್ಕಾಗಿ ಮನೆ, ಮಠ, ಆಸ್ತಿಯನ್ನೆಲ್ಲಾ ಮಾರಿ ಗುಳೇ ಹೊರತಿದ್ದಾನೆ. ಅನ್ನದಾತನಅಂಗೈಯಗಲದ ಹೊಲ ಶ್ರೀಮಂತರ ಸುಪರ್ದಿಯಲ್ಲಿ ಬೃಹದಾಕಾರದ ಮಾಲ್ ಗಳಾಗಿ ಬದಲಾಗಿದೆ. ರೈತನ ಸಮಾಧಿಯ ಮೇಲೆಸೌಧ ಕಟ್ಟುವವರಿಗೆ ಧಿಕ್ಕಾರವಿರಲಿ.
ತುಂಡು ಭೂಮಿಯಲ್ಲಿ ಅನ್ನದಾತ ಅದಿನ್ನೆಷ್ಟು ಆಸೆಯಿಂದ ಕನಸುಗಳನ್ನು ಬಿತ್ತಿದ್ದನೋ? ಮಾಡಿದ ಸಾಲ ತೀರಿಸುವ ಕನಸು, ಮಗಳಿಗೊಂದು ಮದುವೆ, ಮಗನಿಗೊಂದು ಒಳ್ಳೆ ಶಿಕ್ಷಣ, ಇರಲಿಕ್ಕೊಂದು ಮನೆ... ಇನ್ನೂ ಏನೇನಿದ್ದವೋ ಪಾಪ! ಬಿತ್ತಿದ ಕನಸುಮೊಳೆತು, ಬೆಳೆದು, ತೆನೆಗಟ್ಟಿ, ಕಾಳು ಬೇರ್ಪಡುವ ಮುನ್ನವೇ ಮಗುಚಿಬಿದ್ದಿದೆ. ಬದುಕು ಬಂಗಾರವಾಗಿಸಬೇಕಾದ ಬೆಳೆಕಣ್ಣೇದುರಿಗೇ ಬುರ್ ಬುಶ್ ಆಗುತ್ತಿರುವುದನ್ನು ಕಂಡ ರೈತ ಎದೆಬಡಿದುಕೊಳ್ಳುತ್ತ, ಹಣೆ ಚಚ್ಚಿಕೊಳ್ಳುತ್ತಿದ್ದರೆ, ಅವನಿಂದ ಅಧಿಕಾರಪಡೆದವರು ಅವನೆದೆಗೆ ಗುಂಡಿಕ್ಕುವ ಭಂಡ ಧೈರ್ಯ ತಾಳಿದರು.ಅವರಿಗೆ ಬರಗಾಲ ಬರಲಿ ಅಥವಾ ನೆರೆಹಾವಳಿ ಬಂದು ರೈತಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆಅಕ್ಕನತ್ತ ಹೋಗುವುದು ಬಿಡಲಿಲ್ಲ. ಮನೆಗೆ ಬೆಂಕಿ ಬೀಳಲಿ. ನೆರೆಹಾವಳಿ ಹಾಗೂಬರಗಾಲ ಬಿದ್ದಾಗ ಮಾತ್ರ ಬಡಪಾಯಿ ರೈತನ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕುತ್ತದೆ. ಅದರ ಪರಿಣಾಮದಿಂದ ಪರಿಹಾರ ಘೋಷಿಸಲುಸಮಿತಿಗಳ ಖರ್ಚು ವೆಚ್ಚಗಳಿಗೇ ಹಣ ಸೋರಿಕೆ ಯಾಗುತ್ತದೆಯೇ ವಿನಃ ಸರ್ಕಾರದ ಹಣ ರೈನಿಗೆ ಮುಟ್ಟುವುದು ಕಿಂಚಿತ್ತು ಮಾತ್ರ. ಅದಕ್ಕೇ ಇರಬೇಕು ಇಂತವರನ್ನು ನೋಡಿಯೇ ಪತ್ರಕರ್ತ ಪಿ. ಸಾಯಿನಾಥ ಬರೆದಎವ್ರಿಬಡಿ ಲವ್ಸ್ ಗುಡ್ ಡ್ರಾಟ್ ’ (ತೀವ್ರಬರಗಾಲವೆಂದರೆ ಎಲ್ಲರಿಗೂ ಪ್ರೀತಿ) ಪುಸ್ತಕ ಸತ್ಯ.
ಆದರೆ ಬರಗಾಲವೆಂದರೆ ಬದುಕು ಬಣ ಬಣ. ಅನ್ನ ನೀಡುವ ಭೂಮಿ ಕಾದ ಕೆಬ್ಬಿಣದುಂಡೆಯಾಗುತ್ತದೆ. ಕುಡಿಯುವ ನೀರಿಗೂತತ್ವಾರ. ಜನರು ಗೇಣು ಹೊಟ್ಟೆ ತುಂಬಿಸಿಕೊಳ್ಳಲು ಗುಳೇ ಹೋಗುವುದು ಸರ್ವೇ ಸಾಮಾನ್ಯವಾಗುತ್ತಿದೆ. ಹುಟ್ಟಿಸಿದ ದೇವರು ಹುಲ್ಲುಮೇಯಿಸುವುದಿಲ್ಲವಾದರೂ ನಮ್ಮನ್ನಾಳುವ ಸರ್ಕಾರ ಪರದೇಶದವರಿಗೆ ಒತ್ತೆಯಾಳಾಗಿಸುತ್ತದೆ. ಮತ್ತೆ ಗುಲಾಮಗಿರಿಯದೇಕಾರುಬಾರು’. ಹೆಣ್ಣು, ಹೆಂಡ, ಹೊನ್ನಿನದೇ ಗಮ್ಮತ್ತು!
ಹಾಗಾಗಬಾರದು. ರೈತ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗಬೇಕು. ಕೃಷಿ ನೀತಿ ಬದಲಾಗಿ ಆತ ತನ್ನ ಬೆಳೆಗೆ ತಾನೇ ಬೆಲೆನಿಗದಿಮಾಡುವಂತಾಗಬೇಕು. ಮಾರುಕಟ್ಟೆಯ ಪ್ರಾಂಗಣಗಳು ಈಗ ಇದ್ದದ್ದಕ್ಕಿಂತ ಇನ್ನಷ್ಟು ಸಮೀಪದಲ್ಲಿಬೇಕು. ಸಾಲದಬಾಧೆಯಿಂದ ತತ್ತರಿಸಿದ ನೇಗಿಲಯೋಗಿಯ ಹೆಗಲು ಋಣಮುಕ್ತವಾಗಲಿ. ಸಮಸ್ಯೆಗಳ ಸುಳಿಗೆ ಸಿಲುಕಿದ ರೈತ ನೇಣಿಗೆಕೊರಳೊಡ್ಡದೇ ಗಟ್ಟಿಮನಸ್ಸಿನಿಂದ ಬದುಕಬೇಕಾಗಿದೆ. ಯಾರ ಜೀವವೂ ಬದುಕ ಬಾರದಷ್ಟು ನಿಕೃಷ್ಟವಲ್ಲ ಎಂಬ ಡಿ.ವಿ.ಜಿ.ಯವರಮಾತಿನಂತೆ ಬದುಕು ಕಟ್ಟಿಕೊಳ್ಳುವುದರತ್ತ ಗಮ್ಯವಿರಲಿ.
ಎಲ್ಲರಿಗೂ ಬದುಕಿನಲ್ಲಿ ಬವಣೆಗಳು ಬರುವಂತವೇ. ಅವಕ್ಕೆ ಎದೆಗುಂದಬಾರದಷ್ಟೇ. ಕವಿದ ಕತ್ತಲು ಸರಿದು ಬಾಳಲ್ಲಿ ಬೆಳಕು ಮೂಡುವಸರಹೊತ್ತಿನಲ್ಲಿ ಪ್ರಾಣ ಕಳೆದುಕೊಳ್ಳುವ ತಪ್ಪು ನಿರ್ಧಾರ ಕೈಗೊಂಡು ತಮ್ಮನ್ನು ನಂಬಿದವರನ್ನು ನಡುನೀರಲ್ಲಿ ಕೈಬಿಟ್ಟುಹೋಗಿರುತ್ತಾರೆ. ಪರೀಕ್ಷೆಯಲ್ಲಿ ಫೇಲಾದವರು, ಬಿಜಿನೆಸ್ ನಲ್ಲಿ ನಷ್ಟ ಆದವರು, ಬಲತ್ಕಾರಕ್ಕೊಳಗಾದವರು.... ಹೀಗೆ ನಾನಾತರಹದ ಜನರು. ಅವರಿಗೆ ಗೊತ್ತೇ ಇಲ್ಲ ಎಲ್ಲಕ್ಕಿಂತ ಹೆಚ್ಚಾಗಿ ಬದುಕು ದೊಡ್ಡದು . ಅದನ್ನು ಪ್ರೀತಿಸಬೇಕು.
ಭೂಮಿಯ ಮೇಲೆ ಅನಾಥರು, ಲೋಕ ನಿಂದಿತರು, ಅಜ್ಞಾನಿಗಳು, ವಿಕಲಚೇತನರು, ಕೊಲೆಗಡುಕರು, ಮೋಸ ದಗಾನೇ ತಮ್ಮಜೀವನವೆಂದು ಬದುಕುತ್ತಿರುವವರೂ ಇದ್ದಾರೆ. ಅವರಿಗಿಂತ ನಾವು ಕೀಳಾದೆವಾ? ನಮ್ಮ ಬಾಳಿನಲ್ಲಿ ನಡೆದ ಒಂದು ಸಣ್ಣ ತಪ್ಪಿಗೆಆತ್ಮಹತ್ಯೆಯೇ ಸರಿಯದ ಉತ್ತರವೇ? ಸ್ವಲ್ಪ ಯೋಚಿಸಿ. ನಮ್ಮನ್ನೇ ನಂಬಿದ ತಂದೆ-ತಾಯಿ, ಗಂಡ, ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಮಿತ್ರರು, ಬಂಧು-ಬಳಗ ಹೀಗೆ ನೂರೆಂಟು ಮಂದಿ ಇದ್ದಾರೆ. ಅವರನ್ನೆಲ್ಲಾ ಬಿಟ್ಟು ಕಾಣದ ಲೋಕಕ್ಕೆ ಹೋಗುವುದುಯಾವ ನ್ಯಾಯ? ನಮ್ಮನ್ನು ನಂಬಿದವರಿಗಾಗಿಯಾದರೂ ಬದುಕಬೇಕಾಗಿದೆ. ಸಾಧಿಸಿದ್ದಕ್ಕಿಂತ ಸಾಧಿಸುವ ಕೆಲಸಗಳೇನಕ. ಅವುಗಳತ್ತ ನಮ್ಮೆಲ್ಲರ ಗುರಿಯೊಂದಿಗೆ ನಮ್ಮ ಪ್ರಯತ್ನವಿರಲಿ. ಸಾಧಕರ ಸಾಧನೆಯ ಚಿತ್ರ ನಮ್ಮ ಕಣ್ಮುಂದೆ ಪ್ರತಿ ಕ್ಷಣಪಟಪಟಿಸುತ್ತಿರಲಿ.
ಸುರಿದ ಕತ್ತಲು ಕರಗಿ ಬೆಳಕು ಮೂಡಲೇಬೇಕು. ಮರಭೂಮಿಯಲ್ಲಿಕಾರಂಜಿಯಂತ ನೀರಿನ ಬುಗ್ಗೆ ಊಟೆಯೊಡೆಯಲೇಬೇಕು. ಎಲ್ಲರ ಬದುಕಿನಲ್ಲೂ ಸಂತೋಷದ ಹೂವು ಅರಳಲೇಬೇಕು. ಅಲ್ಲಿಯತನಕ ಎಲ್ಲರಲ್ಲೂ ಬತ್ತದ ಜೀವನೋತ್ಸಾಹ ಚಿಮ್ಮುತಿರಲಿ. ನಿಮ್ಮ ಬದುಕಿನಲ್ಲಿ ಪ್ರೀತಿಕಾರಂಜಿ ಕಲರವ ಇರಲಿ.